Skip Navigation Links ಕನ್ನಡ | English
   

ನಮ್ಮ ಬಗ್ಗೆ
ಉದ್ದೇಶ
ಸಾಂಸ್ಥಿಕ ರಚನೆ
ಯೋಜನೆಗಳು
ಕಾಯ್ದೆಗಳು ಮತ್ತು ನೀತಿಗಳು
ಟೆಂಡರ್‍ಗಳು ಮತ್ತು ಪ್ರಕಟಣೆಗಳು
ಮಾಹಿತಿ ಹಕ್ಕು ಅಧಿನಿಯಮ ವಿಷಯಗಳು
ಪ್ರತ್ಯಾದಾನ (ಫೀಡ್ ಬ್ಯಾಕ್)
ಲೋಡ್ ಕರ್ವ್
ಸಿಬ್ಬಂದಿ ಮೇಲ್
ವೀಕ್ಷಣೆ: 351320


 
     
 
 


ರಾಜ್ಯ ಸರ್ಕಾರವು ಏಪ್ರಿಲ್ 2007 ರಲ್ಲಿ ಕೆ.ಪಿ.ಸಿ.ಎಲ್‍ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಹೆಚ್ಚಳದ ಪ್ರಯತ್ನಗಳಿಗೆ ಪೂರಕವಾಗಿ ವಿಶೇಷ ಉದ್ದೇಶಿತ ವಾಹಕವನ್ನು (ಎಸ್.ಪಿ.ವಿ) ಅಂದರೆ ಪಿ.ಸಿ.ಕೆ.ಎಲ್ ಸಂಸ್ಥೆಯನ್ನು ರಚಿಸಲು ಒಪ್ಪಿಗೆ ನೀಡಿತು. ಪಿಸಿಕೆಎಲ್ ಸಂಸ್ಥೆಯು ಕಂಪನಿ ಕಾಯ್ದೆ 1956 ರ ಅನುಸಾರ 20ನೇ ಆಗಸ್ಟ್ 2007 ರಂದು ಐದು ಕೋಟಿ ರೂಪಾಯಿಗಳ ಆರಂಭಿಕ ಬಂಡವಾಳದೊಂದಿಗೆ 16ನೇ ಅಕ್ಟೋಬರ್ 2007 ರಿಂದ ತನ್ನ ವ್ಯಾವಹಾರಿಕ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿತು. ಎಲ್ಲಾ ಐದು ವಿತರಣಾ ಕಂಪನಿಗಳು ತಲಾ ಒಂದು ಕೋಟಿ ರೂಪಾಯಿಗಳನ್ನು ವಂತಿಗೆ ಹೂಡಿದ್ದು ಇದರಲ್ಲಿ ಒಂದು ಲಕ್ಷ ರೂಪಾಯಿಗಳ ಈಕ್ವಿಟಿ ಷೇರು ಹಣವನ್ನು ಒಳಗೊಂಡಿರುತ್ತದೆ.

ಭಾರತ ಸರ್ಕಾರದ ವಿದ್ಯುತ್ ಮಂತ್ರಾಲಯದ ಪ್ರಕರಣ 1 ಮತ್ತು ಪ್ರಕರಣ 2 ರ ಬಿಡ್ಡಿಂಗ್ ಮಾರ್ಗದರ್ಶಿಗಳನ್ವಯ ನೂತನ ವಿದ್ಯುತ್ ಯೋಜನೆಗಳನ್ನು ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಸ್ಥಾಪಿಸಿ ವಿದ್ಯುತ್ ಸಾಮರ್ಥ್ಯ ಹೆಚ್ಚಿಸಲು ಪಿ.ಸಿ.ಕೆ.ಎಲ್ ಸಂಸ್ಥೆಯು ಜವಾಬ್ದಾರಿ ಹೊಂದಿರುತ್ತದೆ. ಅಲ್ಪಾವಧಿ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರವನ್ನು ಸರಿದೂಗಿಸಲು ಪಿ.ಸಿ.ಕೆ.ಎಲ್ ಸಂಸ್ಥೆಯು ಎಸ್ಕಾಂಗಳ ಪರವಾಗಿ ವಿವಿಧ ಮೂಲಗಳಿಂದ, ಅಂದರೆ ಭಾರತೀಯ ವಿದ್ಯುತ್ ವಿನಿಮಯ ಲಿಮಿಟೆಡ್, ಬ್ಯಾಂಕಿಂಗ್ ಮತ್ತು ದ್ವಿಪಕ್ಷೀಯ ವ್ಯವಹಾರಗಳು ಸೇರಿದಂತೆ ವಿದ್ಯುತ್ ಖರೀದಿ ಮಾಡುತ್ತಿದೆ. ವಿದ್ಯುತ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಪಿ.ಸಿ.ಕೆ.ಎಲ್ ಸಂಸ್ಥೆಯು, ಇತರೆ (ಹೊರ) ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳೊಂದಿಗೆ ವಿದ್ಯುತ್ ಸಂಬಂಧಿತ ವಿಷಯಗಳೊಂದಿಗೆ ಸಹಕರಿಸುವುದಲ್ಲದೆ ಹಾಗೂ ದಕ್ಷಿಣ ಪ್ರಾದೇಶಿಕ ಶಕ್ತಿ ಸಮಿತಿಯಲ್ಲಿ ಪಾಲ್ಗೊಳ್ಳುವುದು.

 

 
 



ಧ್ಯೇಯೋದ್ದೇಶ

"ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ಸರ್ವರಿಗೂ ವಿದ್ಯುತ್ ಸೌಲಭ್ಯ" 

 

 

 



  

 ಲಾಗಿನ್